ಸ್ಕಿಲ್ ಟ್ರೈನಿಂಗ್ ಸೆಂಟರ್

ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗುವುದಿಲ್ಲ ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಕವಾಗಿ ಸದೃಢರಾಗಲು ಹೆಚ್ಚಿನ ಕೌಶಲ್ಯ ಅಗತ್ಯವಿದ್ದು, ವಿವಿಧ ವಿಭಾಗಗಳಲ್ಲಿ ಪ್ರೋತ್ಸಾಹ ಮತ್ತು ತರಬೇತಿ ನೀಡಿ ತಿಪಟೂರು ತಾಲ್ಲೂಕು ನುರಿತ ಯುವ ಜನತೆಯ ಕೇಂದ್ರವಾಗಿ ಹೊರಹೊಮ್ಮಬೇಕು ಎಂಬ ವಾಕ್ಯಕ್ಕೆ ಕಂಕಣಬದ್ಧರಾಗಿರುವ ಶ್ರೀ ಸಿ.ಬಿ ಶಶಿಧರ್ ಅವರು ಯುವ ಜನತೆಯ ಉದ್ಯೋಗ ಸೃಷ್ಟಿಗಾಗಿ ನುರಿತು ತರಬೇತುದಾರರಿಂದ ತರಬೇತಿ ನೀಡಲು ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಎಂಬ ಉತ್ತಮ ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ. 

 

ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿರುವ ಯುವ ಜನತೆಯ ಕಷ್ಟಕ್ಕೆ ಬೆನ್ನೆಲುಬಾಗಿನಿಲ್ಲುವ ಸದುದ್ದೇಶದಿಂದ  ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. 

ಯುವಜನತೆ ಆರ್ಥಿಕ ಸಬಲೀಕರಣಕ್ಕೆ ಉದ್ದೇಶದೊಂದಿಗೆ ಯುವಜನತೆಯ ಅಭಿರುಚಿಗೆ ತಕ್ಕಂತೆ ಸಮಾಲೋಚಿಸಿ ಅಗತ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಳ್ಳುವ ವೇದಿಕೆ. 

 

ಯುವಶಕ್ತಿ ದೇಶದ ಸಂಪತ್ತು, ಆದರೆ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಯುವಜನತೆಯನ್ನು ಸದ್ಭಳಕೆ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಮಾನವ ಸಂಪನ್ಮೂಲವನ್ನು ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ತರಬೇತಿ ವಿಚಾರದಲ್ಲಿ ಕಡೆಗಣಿಸಲಾಗುತ್ತಿದೆ. 

ಈ ಆಧುನಿಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗುವುದಿಲ್ಲ , ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಹೆಚ್ಚಿನ ಕೌಶಲ್ಯ ಅಗತ್ಯವಿದೆ. ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಮತ್ತು ಪ್ರೋತ್ಸಾಹ ಅವಶ್ಯಕವಾಗಿದೆ. 

ಕಲ್ಪತರು ನಾಡು ತುಮಕೂರು ಜಿಲ್ಲೆಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ತಿಪಟೂರಿನ ಸಮಗ್ರ ಅಭಿವೃದ್ಧಿಯ ಮಹತ್ವಾಕಾಂಕ್ಷೆಯ ಆಶಯದೊಂದಿಗೆ ತಾಲ್ಲೂಕಿನ ಭವಿಷ್ಯದ ಭರವಸೆಯ ಕಾಂಗ್ರೆಸ್ ಪಕ್ಷದ ಉದಯೋನ್ಮುಖ ಯುವ ನಾಯಕರಾದ ಶ್ರೀ ಸಿ.ಬಿ ಶಶಿಧರ್ (ಟೂಡಾ) ರವರು ಯುವ ಜನತೆ ಭವಿಷ್ಯಕ್ಕಾಗಿ ಯುವಜನತೆ ಆರ್ಥಿಕವಾಗಿ ಸದೃಢರಾಗಲು ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. 

 

ಜನಸ್ಪಂದನ ಟ್ರಸ್ಟ್ ಅಧ್ಯಕ್ಷರು ಹಾಗು ಕಾಂಗ್ರೆಸ್ ಮುಖಂಡರಾದ ಶ್ರೀ ಸಿ.ಬಿ ಶಶಿಧರ್ (ಟೂಡಾ) ರವರು ಖ್ಯಾತ ಸ್ಟ್ರ್ಯಾಟಜಿಸ್ಟ್ ಎಂ.ಜೆ ಶ್ರೀಕಾಂತ್ ಅವರ ಸಹಯೋಗದೊಂದಿಗೆ ಬೆಂಗಳೂರಿನ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯ ಡಾ. ಹೇಮಾ ದಿವಾಕರ್ ಹಾಗು ಉನ್ನತಿ ಮತ್ತು ಕ್ವೆಸ್ ಸಂಸ್ಥೆಗಳ ಒಡಂಬಡಿಕೆಯೊಂದಿಗೆ ಯುವಜನ ಸ್ಪಂದನ ಕೌಶಲ್ಯ ತರಬೇತಿ ಪ್ರಾರಂಭವಾಗಿದೆ. 

 

ತಿಪಟೂರು ನಗರದ ಬಯಲು ರಂಗಮಂದಿರದಲ್ಲಿ ಯುವ ಸಮೂಹದೊಂದಿಗೆ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಆರಂಭ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ “ಉದ್ಯೋಗ ಕೌಶಲ್ಯ” ಕುರಿತು ಶ್ರೀ ಸಿ.ಬಿ ಶಶಿಧರ್ (ಟೂಡಾ) ಅವರು ತಿಪಟೂರಿನ ಯುವ ಜನತೆಯೊಂದಿಗೆ ಸಂವಾದ ನಡೆಸಿದರು. 

 

ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗುವುದಿಲ್ಲ ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಕವಾಗಿ ಸದೃಢರಾಗಲು ಹೆಚ್ಚಿನ ಕೌಶಲ್ಯ ಅಗತ್ಯವಿದ್ದು, ವಿವಿಧ ವಿಭಾಗಗಳಲ್ಲಿ ಪ್ರೋತ್ಸಾಹ ಮತ್ತು ತರಬೇತಿ ನೀಡಿ ತಿಪಟೂರು ತಾಲ್ಲೂಕು ನುರಿತ ಯುವ ಜನತೆಯ ಕೇಂದ್ರವಾಗಿ ಹೊರಹೊಮ್ಮಬೇಕು ಎಂಬ ವಾಕ್ಯಕ್ಕೆ ಕಂಕಣಬದ್ಧರಾಗಿರುವ ಶ್ರೀ ಸಿ.ಬಿ ಶಶಿಧರ್ ಅವರು ಯುವ ಜನತೆಯ ಉದ್ಯೋಗ ಸೃಷ್ಟಿಗಾಗಿ ನುರಿತು ತರಬೇತುದಾರರಿಂದ ತರಬೇತಿ ನೀಡಲು ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಎಂಬ ಉತ್ತಮ ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ. 

ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ಸೌಲಭ್ಯಗಳು

* ಅತ್ಯುನ್ನತ ಕೌಶಲ್ಯ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ನುರಿತ ತರಬೇತುದಾರರಿಂದ ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. 

* ನಿರ್ವಹಿಸುತ್ತಿರುವ ಕೆಲಸ ಜತೆಗೆ ಅನುಗುಣವಾದ ಉನ್ನತ ಕೌಶಲ್ಯದೊಂದಿಗೆ ಕಾರ್ಯ ನಿರ್ವಹಣೆಯ ತರಬೇತಿ 

* ಯುವ ಜನತೆ ಉದ್ಯೋಗ ಹರಸಿ ಪ್ರಮುಖ ನಗರಗಳಿಗೆ ವಲಸೆ ಹೋಗುವುದಕ್ಕೆ ಕಡಿವಾಣ ಹಾಕಿ ಉದ್ಯೋಗ ಸೃಷ್ಟಿಸಿಕೊಳ್ಳಲು ತುಮಕೂರು ಜಿಲ್ಲೆಯಲ್ಲಿಯೇ ಪ್ರಾರಂಭವಾಗಿರುವ ಕೌಶಲ್ಯ ತರಬೇತಿ ಕೇಂದ್ರ ‘ಯುವಜನ ಸ್ಪಂದನ’ 

* ಉದ್ಯೋಗ ಸೃಷ್ಟಿಯ ಜೊತೆಗೆ ವ್ಯಕ್ತಿತ್ವ ವಿಕಸನ ಜೀವನ ಕ್ರಮ ಹಾಗು ಸದೃಢ ಭವಿಷ್ಯದ ನಿರ್ಮಾಣಕ್ಕೆ ನಾಂದಿಯಾಗಲಿದೆ "ಯುವಜನ ಸ್ಪಂದನ"  ಕೌಶಲ್ಯ ತರಬೇತಿ ಕೇಂದ್ರ.